ಎಡಗೈ ಹಸ್ತಾಕ್ಷರ
ಏನಪ್ಪಾ ಇದು ಈ ಬಾರಿ ತಿಂಡಿಪೋತನ ಕಥೆಯ ಶೀರ್ಷಿಕೆಯಲ್ಲಿ ಯಾವ ತಿಂಡಿಯ ಹೆಸರು ಇಲ್ಲಾ ಎನ್ನುತ್ತೀರಾ? ಹೌದು ಈ ನೆನಪು food for thought ಆಲೋಚನೆಯ ಆಹಾರ.
ನನಗೆ ಸುಮಾರು ಏಳೆಂಟು ವರ್ಷ. ನಾವಿದ್ದ ಊರು ಬಳ್ಳಾರಿ. ಬಿಸಿಲು ರೊಟ್ಟಿ ಬಲು ಜೋರು. ರೈತ ಸೇವಾ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕರಾಗಿ ಅಪ್ಪನಿಗೆ ವರ್ಗವಾಗಿತ್ತು. ಓಡಾಡಲು ಒಂದು ಹಳೇ yezdi ಬೈಕು.
ಕೆಲಸದ ಸಮಯ 9 ರಿಂದ 6. ಆದರೆ ಅಪ್ಪ 8:15 ಗೆ ಬೈಕ್ kick ಮಾಡಲು ಶುರು ಮಾಡುತ್ತಿದ್ದರು. ಬಳ್ಳಾರಿಯ ಧಗೆಯಲ್ಲೂ ಈ ಬೈಕಿಗೆ ಬರೋಬ್ಬರಿ 30 ನಿಮಿಷ ಬೇಕಿತ್ತು ಗರಂ ಆಗಲು
.
ಪಕ್ಕದ ಮನೇಯವರಿಗೆಲ್ಲಾ ಒಹೋ ಮೂರ್ತಿಯವರು ಕೆಲಸಕ್ಕೆ ಹೊರಟರು ಎಂಬುದು ತಿಳಿಯುತ್ತಿತ್ತು. ಅಪ್ಪ ಮೊದಲು ಮದುವೆಯಾಗಿದ್ದು syndicate bank ಅನ್ನು ಆಮೇಲೆ ಅಮ್ಮನನ್ನು!
ಜೀವನದಲ್ಲಿ ಮೊದಲ ಆದ್ಯತೆ ಬ್ಯಾಂಕ್ ನಂತರ ಮಿಕ್ಕಿದ್ದೆಲ್ಲ. ಬ್ಯಾಂಕಿನಿಂದ ಬಂದದ್ದೇ ಅಲ್ಲವೇ ಆ ಬೈಕು ಕೂಡ ಅದಕ್ಕೆ ಅರ್ಧ ತಾಸಾದರೂ ಕಿಕ್ಕ್ ಮಾಡಿ ಓಡಿಸುತ್ತಿದ್ದರು. ಸಂಜೆ ಆರಕ್ಕೆ
ಆಫೀಸ್ ನಿಂದ ಹೊರತು ೬೩೦ ಮನೆ ಸೇರುತ್ತಿದ್ದರು.
ಅಂದು ಒಂದು ದಿನ ನಾನು ಸುಮಾರು ನಾಲ್ಕು ಘಂಟೆಗೆ ಶಾಲೆಯಿಂದ ಮನೆಗೆ ಬಂದು ನೋಡಿದರೆ ಆಗಲೇ ಅಪ್ಪ ಮನೆಗೆ ಬಂದಿದ್ದರು. ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ದಾನಾ
ಎಂದೆನಿಸಿತು ನನಗೆ. ಕುತೂಹಲದಿಂದ ಮತ್ತೊಮ್ಮೆ ನೋಡಿದರೆ ಬಲಗೈಗೆ ಪೆಟ್ಟಾಗಿತ್ತು ಆದರೆ ಎಡಗೈನಲ್ಲಿ ಏನೋ ಗೀಚುತ್ತಿದ್ದರು. ಏನಪ್ಪಾ ಅಂತ ಹತ್ತಿರ ಹೋಗಿ ನೋಡಿದರೆ
ಅವರ ಹಸ್ತಾಕ್ಷರವನ್ನು ಎಡಗೈನಲ್ಲಿ ಮಾಡಲು ಅಭ್ಯಾಸ ಮಾಡುತ್ತಿದ್ದರು! ಏನಪ್ಪಾ ನಿನ್ನ ಕಥೆ ಅಂತ ಕೇಳಿದರೆ. ಪೆಟ್ಟಾಗಿರುವುದು ಬಲಗೈ. ಎಡಗೈ ಸರಿಯಾಗೇ ಇದೆ. ನಾಳೆ ಆಫೀಸ್ನಲ್ಲಿ
ಕೆಲಸ ಮಾಡಬಹುದು! ನನಗೆ ಮಳೆ ಬಂದರೆ ಸಾಕು ಶಾಲೆಗೆ ರಜೆ ಎಂದು ಕುಣಿದಾಡುತ್ತಿದ್ದೆ. ಅಪ್ಪನ ಈ ಸ್ವಭಾವ ನನ್ನಲ್ಲಿ ಗಾಢವಾದ ಪರಿಣಾಮ ಉಂಟು ಮಾಡಿತು. ಅಲ್ಲಿಯವರೆಗೂ
ಅವರನ್ನು ಕಂಡು ಹೆದರುತ್ತಿದ್ದೆ. ನಮ್ಮಪ್ಪ ಬರೀ ಕೆಲಸ ಕೆಲಸ ಅಷ್ಟೇ ಅಂದುಕೊಳ್ಳುತ್ತಿದ್ದೆ! ಅಂದು ಭಯ ಹೋಗಿ ಗೌರವ ಉಕ್ಕಿತು. ಪ್ರಾಮಾಣಿಕತೆಗಿಂತ ದೊಡ್ಡ ಶ್ರೀಮಂತಿಕೆಯಿಲ್ಲ ಅದನ್ನೇ ಬಳುವಳಿಯಾಗಿ ಕೊಟ್ಟ ಅಪ್ಪ. ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಇದಕ್ಕಿಂತ ಪಿತ್ರಾರ್ಜಿತ ಸ್ವತ್ತು ಬೇಕೇ ಮಕ್ಕಳಿಗೆ?
Every day is father's mother's brother's sister's daughter's son's day.
ಹುಟ್ಟಿಗೆ ಸಾವಿಗೆ ದಿನಗಳಷ್ಟೇ. ಸಂಬಂಧಗಳು ಚಿರಂತನ!
ಮತ್ತೊಮ್ಮೆ ಸಿಗೋಣ :-)
Comments
Post a Comment