Posts

ಎರಡು ತೈರ್ ವಡೆ ಒನ್ ಬೈ ಟು ರಾಗಿ ಮಾಲ್ಟ್

ನನ್ನ ಅಪ್ಪನ ಬ್ಯಾಂಕ್ ವರ್ಗಾವಣೆಗಳಿಂದ, ಅಜ್ಜಿ ತಾತನನ್ನು ನೋಡಲು ಅವಕಾಶವಾಗುತ್ತಿದ್ದದ್ದು ಬೇಸಿಗೆ ಹಾಗು ದಸರಾ ರಜೆಯಲ್ಲಿ ಮಾತ್ರ. ಅಜ್ಜಿ ಮುಗ್ಧತೆಯ ಮೂರ್ತಿ, ತಾಯಿಯೇ ದೇವರು ಅನ್ನುತ್ತೇವೆ ಇನ್ನು ಅವರು ನನ್ನ ತಾಯಿಯ ತಾಯಿ! ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅಂತ ನೀವೇ ಊಹಿಸಿಕೊಳ್ಳಿ.  ಅಜ್ಜ ದಕ್ಷ ಹಾಗು ಪ್ರಾಮಾಣಿಕ ಶಿಕ್ಷಕ, ವೃತ್ತಿಯಲ್ಲಿನ ಶಿಸ್ತು ಪ್ರಾಮಾಣಿಕತೆಯ ಗತ್ತು ಎರಡೂ ಕೂಡ ನಿವೃತ್ತಿಯಾದ ನಂತರವೂ ಜೀವನದಲ್ಲಿ ಹಾಗೆ ಇತ್ತು. ನನಗೆ ಬುದ್ಧಿ ತಿಳಿದಾಗಲಿಂದಲೂ ನೋಡಿದ್ದೇ, ಎಲ್ಲರಿಗು ಅವರನ್ನು ಕಂಡರೆ ಒಂದು ತರಹ ಭಯ, ಗೌರವದಿಂದ ಬರುವ ಸ್ವಾಭಾವಿಕ ಭಯ/ಭಕ್ತಿ ಅಂದುಕೊಳ್ಳಿ. ೧೯೯೦-೧೯೯೫ಕಾಲದ ಕಥೆ ಇದು. ನಾನು ಪ್ರಾಥಮಿಕ ಶಾಲೆಗೆ ಹೋಗೊತ್ತಿದ್ದ ಕಾಲ. ಬೇಸಿಗೆ/ದಸರಾ ರಜೆ ಅಂದರೆ ಮೊದಲು ತಲೆಗೆ ಹೊಳೆಯುತ್ತಿದುದೇ ಅಜ್ಜಿಯ ಪ್ರೀತಿಯ ೫೦ ಪೈಸೆ ಐಸ್ ಕ್ರೀಮ್ ಹಾಗು ಆಕೆ ಉಣಬಣಿಸುತ್ತಿದ್ದ ಬೇಳೆ ಸಾರು ಅನ್ನ.  ಅದೆ ಸಮಯಕ್ಕೆ ಅಜ್ಜನ ಶಿಸ್ತು ಕಾಡುತಿತ್ತು! "Holiday Homework" ಮುಗಿಸಿದ ಮೇಲು ಅವರ ಇಂಗ್ಲಿಷ್ ಗ್ರಾಮರ್ ಪಾಠ ೨ ಗಂಟೆ ಕುಳಿತರೆ ಮಾತ್ರ ಆಡಲು ಅವಕಾಶ ಇಲ್ಲದಿದ್ದರೆ ಇಲ್ಲ. ಮಗಳ ಒಬ್ಬನೆ  ಮಗ ಮುದ್ದಿನಲ್ಲಿ ಹಾಳಾಗಬಹುದು ಎಂದು ತಾತನ ಲೆಕ್ಕಾಚಾರ. ಆಗ ತಿಳಿಯದ್ದು ಈಗ ಎಲ್ಲವು ಅರ್ಥವಾಗುತ್ತದೆ :-). ಅಜ್ಜಿಯ ಮುದ್ದು ತಾತನ ಗುದ್ದು ಎರಡರ ನಡುವೆ ಬಾಲ್ಯ ಹಿತವಾಗಿತ್ತು.

ಎಡಗೈ ಹಸ್ತಾಕ್ಷರ

Image
ಏನಪ್ಪಾ ಇದು ಈ ಬಾರಿ ತಿಂಡಿಪೋತನ ಕಥೆಯ ಶೀರ್ಷಿಕೆಯಲ್ಲಿ ಯಾವ ತಿಂಡಿಯ ಹೆಸರು ಇಲ್ಲಾ ಎನ್ನುತ್ತೀರಾ? ಹೌದು ಈ ನೆನಪು food for thought ಆಲೋಚನೆಯ ಆಹಾರ. ನನಗೆ ಸುಮಾರು ಏಳೆಂಟು ವರ್ಷ. ನಾವಿದ್ದ ಊರು ಬಳ್ಳಾರಿ. ಬಿಸಿಲು ರೊಟ್ಟಿ ಬಲು ಜೋರು. ರೈತ ಸೇವಾ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕರಾಗಿ ಅಪ್ಪನಿಗೆ ವರ್ಗವಾಗಿತ್ತು. ಓಡಾಡಲು ಒಂದು ಹಳೇ yezdi ಬೈಕು. ಕೆಲಸದ ಸಮಯ 9 ರಿಂದ 6. ಆದರೆ ಅಪ್ಪ 8:15 ಗೆ ಬೈಕ್ kick ಮಾಡಲು ಶುರು ಮಾಡುತ್ತಿದ್ದರು. ಬಳ್ಳಾರಿಯ ಧಗೆಯಲ್ಲೂ ಈ ಬೈಕಿಗೆ ಬರೋಬ್ಬರಿ 30 ನಿಮಿಷ ಬೇಕಿತ್ತು ಗರಂ ಆಗಲು . ಪಕ್ಕದ ಮನೇಯವರಿಗೆಲ್ಲಾ ಒಹೋ ಮೂರ್ತಿಯವರು ಕೆಲಸಕ್ಕೆ ಹೊರಟರು ಎಂಬುದು ತಿಳಿಯುತ್ತಿತ್ತು. ಅಪ್ಪ ಮೊದಲು ಮದುವೆಯಾಗಿದ್ದು syndicate bank ಅನ್ನು ಆಮೇಲೆ ಅಮ್ಮನನ್ನು! ಜೀವನದಲ್ಲಿ ಮೊದಲ ಆದ್ಯತೆ ಬ್ಯಾಂಕ್ ನಂತರ ಮಿಕ್ಕಿದ್ದೆಲ್ಲ. ಬ್ಯಾಂಕಿನಿಂದ ಬಂದದ್ದೇ ಅಲ್ಲವೇ ಆ ಬೈಕು ಕೂಡ ಅದಕ್ಕೆ ಅರ್ಧ ತಾಸಾದರೂ ಕಿಕ್ಕ್ ಮಾಡಿ ಓಡಿಸುತ್ತಿದ್ದರು. ಸಂಜೆ ಆರಕ್ಕೆ ಆಫೀಸ್ ನಿಂದ ಹೊರತು ೬೩೦ ಮನೆ ಸೇರುತ್ತಿದ್ದರು.  ಅಂದು ಒಂದು ದಿನ ನಾನು ಸುಮಾರು ನಾಲ್ಕು ಘಂಟೆಗೆ ಶಾಲೆಯಿಂದ ಮನೆಗೆ ಬಂದು ನೋಡಿದರೆ ಆಗಲೇ ಅಪ್ಪ ಮನೆಗೆ ಬಂದಿದ್ದರು.  ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ದಾನಾ ಎಂದೆನಿಸಿತು ನನಗೆ. ಕುತೂಹಲದಿಂದ ಮತ್ತೊಮ್ಮೆ ನೋಡಿದರೆ ಬಲಗೈಗೆ ಪೆಟ್ಟಾಗಿತ್ತು ಆದರೆ ಎಡಗೈನಲ್ಲಿ ಏನೋ ಗೀಚುತ್ತಿದ

ಸಕ್ಕರೆ ಬಿಸ್ಕತ್

೧೯೯೦ರ ನೆನಪುಗಳ ಮೆಲಕು ಹಾಕುತ್ತಾ ಮತ್ತೆ ಬಂದೆ. ಅಪ್ಪನ ಕೆಲಸ ದೂರದ ಊರಿನಲ್ಲಾದ್ದರಿಂದ ಸಂಬಂಧಿಕರು ನಮ್ಮ ಮನೆಗೆ ಬಂದಿದ್ದು ವಿರಳ. ನನ್ನ ಪ್ರಪಂಚವೆಂದರೆ ಅಪ್ಪ ಅಮ್ಮ ಸ್ನೇಹಿತರು ಅಷ್ಟೆ. ರಜೆಯಲ್ಲಿ ಮಾತ್ರ ಸಂಬಧಿಕರೊಂದಿಗೆ ಹಿಗ್ಗುತ್ತಿದ್ದೆ. ಅಧೃಶವಶಾತ್ ದೊಡ್ಡಪ್ಪನಿಗೆ ನಾವಿದ್ದ ತಾಲ್ಲೂಕಿನ ಸಮೀಪದ ಊರಿಗೆ ವರ್ಗಾವಣೆ ಆಯಿತು. ಮಕ್ಕಳು ಹಾಗು ದೊಡ್ಡಮ್ಮ ಹಳ್ಳಿಯಲ್ಲೇ ಇದ್ದರು ಇವರೊಬ್ಬರೆ ಬೇರೆ ಬೇರೆ ಊರುಗಳಲ್ಲಿ ಕೆಲಸದ ನಿಮಿತ್ತ ಇರಬೇಕಾರ ಪರಿಸ್ಥಿತಿ.   ವೃತ್ತಿಯಲ್ಲಿ ಪಶುವೈದ್ಯ. ಆಗಿನ ಕಾಲಕ್ಕೆ  ಸರ್ಕಾರದ ಗೌರವಾನ್ವಿತ ಹುದ್ದೆ, ಆದರೆ ಅತಿ ಸರಳ ವ್ಯಕ್ತಿ. ಎಳ್ಳಷ್ಟೂ ಅಹಂಕಾರವಿರಲಿಲ್ಲ. ಹಳ್ಳಿಯಲ್ಲೇ ಹುಟ್ಟಿ ಬೆಳೆದವರು ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ವೃತ್ತಿಯ ಜೊತೆ ಜೊತೆಗೆ ತಮ್ಮ ಜಮೀನಿನಲ್ಲಿ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ವೃತ್ತಿಯಲ್ಲೂ ಪ್ರಕೃತಿಯ ಮಡಿಲೇ! ದನ, ಕರು, ಎತ್ತು ಯಮ್ಮೆ ಇವುಗಳ ಜೊತೆಯೇ ವೃತ್ತಿ. ನನ್ನ ಜೊತೆಯಿದ್ದಾಗಲೂ ಪ್ರಕೃತಿಯ ಪಾಠಗಳೇ :-) ಆಗಿನ ಕಾಲಕ್ಕೆ ಅವರಿಗೆ ವರ್ಷದ ಎಲ್ಲಾ ಮಳೆಗಳ ಬಗ್ಗೆ ಅರಿವಿತ್ತು. ಹಸ್ತ ಮಳೆ, ಸ್ವಾತಿ ಮಳೆ ಇತ್ಯಾದಿ. ಯಾವ ಹವಾಮಾನ ಇಲಾಖೆಯ ವರದಿಯು ಬೇಕಾಗಿರಲಿಲ್ಲ, ತಲೆ ಎತ್ತಿ ಆಕಾಶ ನೋಡಿದರೆ ಸಾಕು ಇಂದು ಮಳೆ ಅಥವಾ ಇಲ್ಲ ಎಂದು ಕರಾರುವಾಕ್ಕಾಗಿ ಹೇಳುತ್ತಿದ್ದರು. ಪಶು ವೈದ್ಯ ವೃತ್ತಿಯ ಜೊತೆಗೆ

ಹಾಲು ಮೊಸರು ಬೆಣ್ಣೆ ತುಪ್ಪ

ಮತ್ತೊಂದು ನೆನಪು ಮತ್ತೊಮ್ಮೆ ಬಂದೆ. ಅದೇ ೧೯೯೦ ರ ಕಾಲ. ಶಾಲೆಯ ವೇಳೆ ಶಿಕ್ಷಕರ ಶಿಸ್ತು ರಜೆಯಲ್ಲಿ ಅಜ್ಜನ ಗ್ರಾಮರ್ ಕಸರತ್ತು. ನನಗೋ ಬೆಳಿಗ್ಗೆಯಿಂದ ಸಂಜೆಯವರೆಗೂ ಆಡುವ ಆಸೆ, ಹಾರಾಡುವ ಆಸೆ, ನಾನೆಲ್ಲಿ ಹೋಗಲಿ? ಇತ್ತು ಮತ್ತೊಂದು ಸ್ವರ್ಗ.  ಅದೇ ನನ್ನ ದೊಡ್ಡಮ್ಮನ ಹಳ್ಳಿಯ ಮನೆ! ತಾತನ ಮನೆಯಿಂದ ೫ ಕಿ.ಮೀ . ದೂರದಲ್ಲಿತ್ತು. ಇಂದಿನ ಮೆಟ್ರೋ ಪ್ರಯಾಣಿಕರಿಗೆ ಅದೇನು ಮಹಾ ಆದರೆ ಆಗ ಅದೇ ದೂರ ಅದೇ ಒಂದು ಪ್ರಯಾಣ. ದೊಡ್ಡಮ್ಮನ ಮಗ ಅಜ್ಜನ ಮನೆಯಲ್ಲೇ ವ್ಯಾಸಂಗ ಮಾಡುತ್ತಿದ್ದ. ರಜೆಗೆ ಮನೆಗೆ ಹೋಗುವಾಗ ನನ್ನನ್ನು ಅವನ ಸೈಕಲ್ ಹಿಂದಿನ ಸೀಟಿನ ಮೇಲೆ ಕೂರಿಸಿ ಕರೆದುಕೊಂಡು ಹೋಗುತ್ತಿದ್ದ. ದಾರಿಯುದ್ದಕ್ಕೂ ಗದ್ದೆಗಳ ಹಸಿರು, ದೊಡ್ಡ ಕೆರೆಯ ನೀರು, ಮಧ್ಯ ಚಿಕ್ಕ ಪುಟ್ಟ ಊರು, ಹಗುರಾಗುತ್ತಿತ್ತು ಉಸಿರು. ನಮ್ಮ ಸೈಕಲ್ ಕಂಡ ತಕ್ಷಣ ದೊಡ್ಡಮ್ಮನಿಗೆ ಹಿಗ್ಗೋ ಹಿಗ್ಗು. ಅವರ ಕಿರೀ ಮಗನ ಜೊತೆ ತಂಗಿಯ ಮಗ ಬಂದದ್ದು ಅವರಿಗೆ ಎಲ್ಲಿಲ್ಲದ ಸಂತೋಷ. ಹೋದ ತಕ್ಷಣ ಕೈ ಕಾಲು ತೊಳೆದರೆ ಅವರೇ ಖುದ್ದಾಗಿ ಕರೆದು ತಂದ ಹಾಲಿಗೆ ಸಕ್ಕರೆ, ಆಹ್ ಅದರ ಸ್ವಾದ ಕುಡಿದವರಿಗೆ ಮಾತ್ರ ಗೊತ್ತು. ಕಾಲ ಕಾಲಕ್ಕೆ ಊಟ, ತಿಂಡಿ, ಹಾಲು ನಿದ್ದೆ, ಆಡಲು ಹಳ್ಳಿಯ ಗೆಳೆಯರ ಬಳಗ. ಗೋಲಿ ಗೆದ್ದಷ್ಟು, ಗುನ್ನ ಹೊಡೆದಷ್ಟು, ಕಳ್ಳರನ್ನು ಹಿಡಿಯಲು ಪೊಲೀಸ್, ಪೋಲೀಸರ ಕಣ್ಣು ತಪ್ಪಿಸುವ ಕಳ್ಳರು, ಚಿನ್ನಿ ದಾಂಡು ಅಳೆದಷ್ಟು. ಅದಕ್ಕೆ ಸ್ವರ್ಗ ಅಂತ ಕರೆ

"ಪೇಪರ್" ದೋಸೆ

Image
ಪುನಃ ೧೯೯೦-೧೯೯೫ರ ಕಾಲಕ್ಕೆ ವಾಪಸ್ ಹೋಗೋಣವೇ? ಸಾಫ್ಟ್ವೇರ್ ಹಾರ್ಡ್ವೇರ್ ಕಂಪನಿಗಳು ನಮ್ಮ ರಾಜ್ಯಕ್ಕೆ ಇನ್ನೂ ಲಗ್ಗೆ ಇಟ್ಟಿರಲಿಲ್ಲ. ಆ ಕಾಲಕ್ಕೆ ಇಂಜಿನಿಯರ್ ಎಂದರೆ ಸಿವಿಲ್, ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್. ಸರಕಾರದ ಕೆಲಸ ಜನರಲ್ ಮೆರಿಟ್ ಇದ್ದವರಿಗೆ ಸಾಮಾನ್ಯವಾಗಿ ಅಲಭ್ಯವಾಗಿದ್ದ ಕಾಲ. ಖಾಸಗಿ ಕಂಪೆನಿಗಳಲ್ಲಿ ಕೆಲಸ ಬಹಳ ಜಾಸ್ತಿ ಆದರೆ ವೇತನ ಅತಿ ಕಡಿಮೆ. ಅದೇ ತರಹದ ಒಂದು ಖಾಸಗಿ ನೌಕರಿಯಲ್ಲಿದ್ದವರು ನನ್ನ ಸೋದರಮಾವ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಹಿರಿಯ ಮಗ, ಮನೆಗೆ ದುಡಿಯಲೇ ಬೇಕು, ಪ್ರತಿಯೊಂದು ಕಾಸನ್ನು ವಿವೇಚನೆಯೊಂದ ಖರ್ಚು ಮಾಡಬೇಕು. ಆರಕ್ಕೇರದ ಮೂರಕ್ಕಿಳಿಯದ ಗಾದೆ ಮಾತನ್ನು ಇನ್ನೂ ಕೆಳಕ್ಕೆ ತಂದು ಎರಡಕ್ಕೇರದ ಒಂದಕ್ಕಿಳಿಯದ ಸಂಬಳ ಎಂದರೆ ಅತಿಶಯೋಕ್ತಿ ಏನಲ್ಲ! ದೂರದ ಮೈಸೂರಿಗೆ ಬೆಳಿಗ್ಗೆ ಬಸ್ಸಿನಲ್ಲಿ ಪ್ರಯಾಣ ಬೆಳಿಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮತ್ತೆ ಬಸ್ಸನ್ನೇರಿ ಮನೆಯ ಕಡೆ ಪ್ರಯಾಣ. ಮನೆ ಸೇರುವಷ್ಟರಲ್ಲಿ ರಾತ್ರಿ ೯/೧೦. ಇಂತಹ ಒತ್ತಡದ ಬದುಕಲ್ಲೂ ಮನುಷ್ಯ ಯಾವಾಗಲೂ ಲವಲವಿಕೆಯಾಗಿ ನಕ್ಕು ನಗಿಸಿ ಆರಾಮಾಗಿದ್ದರು. ಈ ಕಾಲದಲ್ಲಿ ಲಕ್ಷಗಳನ್ನು ತಿಂಗಳಿಗೆ ಎಣಿಸಿ ಇನ್ನೂ ಬೇಕು ಅನ್ನುವರೇ ಎಲ್ಲಾ, ಆದರೆ ಇರುವುದರಲ್ಲೇ ಸುಖವಾಗಿ ಜೀವನ ನಡೆಸುತ್ತಿದ್ದ ಅವರ ಬದುಕು ಈಗ ನೆನೆಸಿಕೊಂಡರೆ ಆಶ್ಚರ್ಯ ಸಂತೋಷ ಎರಡೂ. ಆಗ ನನಗೆ ಐದಾರು ವರ್ಷ ಇರಬಹುದು, ಕುತೂ